Powered By Blogger

Thursday, February 3, 2011

ಬಾಳುವಂತ ಹೂವೇ

ಬಾಳುವಂತ ಹೂವೇ ಬಾಡುವ ಆಸೆಯೇಕೆ?
ಹಾಡುವಂತ ಕೋಗಿಲೆ ಅಳುವ ಆಸೆಯೇಕೆ?

ಕವಲು ದಾರಿಯಲ್ಲಿ ಬಾಳು ಸಾಧ್ಯವೇ?
ಅವಳಿ ದೋಣಿ ಮೇಲೆ ಯಾಣ ಯೋಗ್ಯವೇ?

ಯಾರಿಗಿಲ್ಲ ನೋವು? ಯಾರಿಗಿಲ್ಲ ಸಾವು?
ವ್ಯರ್ಥ ವ್ಯಸನದಿಂದ ಸಿಹಿಯು ಕೂಡ ಬೇವು
ಬಾಳು ಒಂದು ಸಂತೆ, ಸಂತೆ ತುಂಬ ಚಿಂತೆ
ಮಧ್ಯ ಮದಗಳಿಂದ ಚಿಂತೆ ಬೆಳೆವುದಂತೆ
ಅಂಕೆ ಇರದ ಮನಸನು ದಂಡಿಸುವುದು ನ್ಯಾಯ
ಮೂಖ ಮುಗ್ಧ ದೇಹವ ಹಿಂಸಿಸುವುದು ಹೇಯ
ಸಣ್ಣ ಬಿರುಕು ಸಾಲದೆ ತುಂಬು ದೋಣಿ ತಳ ಸೇರಲು
ಸಣ್ಣ ಅಳುಕು ಸಾಲದೆ ತುಂಬು ಬದುಕು ಬರಡಗಾಲು


ಬಾಳ ಕದನದಲ್ಲಿ ಭರವಸೆಗಳು ಬೇಕು..
ನಾಳೆ ನನ್ನದೆನ್ನುವ ನಂಬಿಕೆಗಳು ಬೇಕು..
ಜೀವರಾಶಿಯಲ್ಲಿ ಮಾನವರಿಗೆ ಆಧ್ಯತೆ..
ನಾವೇ ಮೂಢರಾದರೆ ಜ್ಞಾನಕೆಲ್ಲಿ ಪೂಜ್ಯತೆ..?
ಇಲ್ಲಿ ಈಸಬೇಕು.. ಇದ್ದು ಜಯಿಸಬೇಕು..
ನಾಗರೀಕರಾದಮೇಲೆ ಸುಗುಣರಾಗಬೆಕು..
ನಿನ್ನ ಹಳದಿ ಕಣ್ಣಲಿ ಜನರೇಕೆ ನೀ ನೋಡುವೆ?
ಮನದ ಡೊಂಕು ಕಾಣದೆ ಜಗವನೇಕೆ ದೂರುವೆ?

ಬಾಳುವಂತ ಹೂವೇ ಬಾಡುವ ಆಸೆಯೇಕೆ?
ಹಾಡುವಂತ ಕೋಗಿಲೆ ಅಳುವ ಆಸೆಯೇಕೆ?